Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Bheeshma Sahni

ತಮಸ್ Tamas By Bheeshma Sahni, ಭೀಷ್ಮ ಸಾಹನಿ

₹216.00 ₹240.00 SAVE ₹24

Inclusive of all taxes

In Stock and ready to ship
Enquire on WhatsApp

Product Description

ನಮ್ಮ ದೇಶ ಸ್ವಾತಂತ್ರದ ಸಿಹಿ ಮತ್ತು ದೇಶ ವಿಭಜನೆಯ ಕಹಿಯನ್ನು ಏಕಕಾಲಕ್ಕೆ ಉಂಡಿತು. ಅಂದು ಕೋಮುಗಲಭೆಗಳು ವ್ಯಾಪಕವಾಗಿ ನಡೆದು ಹಿಂದೂ-ಮುಸಲ್ಮಾನ್ ಎಂಬ ತೆರೆ ಶಾಶ್ವತವಾಗಿ ನಮ್ಮ ನಡುವೆ ಬಿದ್ದಿತು. ಭೀಷ್ಮ ಸಾಹನಿಯವರು ಅಂದಿನ ದಂಗೆಗಳನ್ನು, ಜನಾಂಗ ದ್ವೇಷವನ್ನು ಮತ್ತು ಅವುಗಳ ಕ್ರೌರ್ಯವನ್ನು ‘ತಮಸ್’ ಎಂಬ ಹಿಂದಿ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಇದು ಕಲ್ಪನೆಯಲ್ಲ; ಇತಿಹಾಸದ ವಾಸ್ತವ ಸಂಗತಿಯನ್ನಾಧರಿಸಿದೆ. ಐತಿಹಾಸಿಕ ಕಾದಂಬರಿ ಎಂದರೂ ಸರಿಯೇ. ಧರ್ಮಾಂಧತೆ ಮನುಷ್ಯರ ಮನಸ್ಸುಗಳನ್ನು ಕೆಡಿಸಿ ರಾಡಿ ಮಾಡುತ್ತದೆ. ಭಾರತ-ಪಾಕಿಸ್ತಾನ ಎಂದು ದೇಶ ಇಬ್ಭಾಗವಾದ ಸಂದರ್ಭದ ಘಟನೆಗಳನ್ನು ಇಲ್ಲಿ ಸೆರೆಹಿಡಿದು ಮನುಷ್ಯ ರಾಕ್ಷಸನಾಗುವ ಪರಿ ಮತ್ತು ಅಸಂಖ್ಯಾತ ಜೀವಹಾನಿ-ಆಸ್ತಿಪಾಸ್ತಿ ಹಾನಿಯ ಸತ್ಯಘಟನೆಗಳನ್ನು ಕಣ್ಮುಂದೆ ನಿಲ್ಲಿಸಲಾಗಿದೆ. ಇಂದೂ ಕೂಡ ನಾವು ಕೋಮು ವಿದ್ವೇಷದ ದಳ್ಳುರಿಯಿಂದ ಹೊರಗೆ ಬಂದಿಲ್ಲ. ಇದು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದು, ಇದೀಗ ನಾಲ್ಕನೆಯ ಮುದ್ರಣ ಕಾಣುತ್ತಿದೆ. ಇದನ್ನೋದಿಯಾದರೂ ಮನುಷ್ಯ-ಮನುಷ್ಯರ ನಡುವೆ ಸೌಹಾರ್ದ ವಾತಾವರನ ಮೂಡಲೆಂದು ಆಶಿಸುತ್ತ ಅನುವಾದಿಸಿದವರು ಶ್ರೀಮತಿ ಶಾರದಾಸ್ವಾಮಿ ಹಾಗೂ ಡಾ. ಎಸ್. ಎಂ. ರಾಮಚಂದ್ರಸ್ವಾಮಿ.

Other Details

author Bheeshma Sahni
Publisher Navakarnataka Publications
Categories Non-Fiction, Shop All Non-Fiction, History & Politics
SKU 6884843

Customer Reviews

Please log in to write a review.

Log In

Reviews (0)

No reviews yet. Be the first to review this product!

₹216.00 ತಮಸ್ Tamas By Bheeshma Sahni, ಭೀಷ್ಮ ಸಾಹನಿ