ಬಾಬಾಸಾಹೇಬ್: ಒಂದನೇ ಸಂಪುಟ- ಹುಟ್ಟಿನಿಂದ ಮಹಾಡ್ ತನಕ | Becoming Babasaheb By Aakash Singh Rathore
Inclusive of all taxes
Product Description
ಇದು ಆಕಾಶ್ ಸಿಂಗ್ ರಾಥೋಡ್ ಅವರು ರಚಿಸಿರುವ ಬಾಬಾಸಾಹೇಬರ ಜೀವನಚರಿತ್ರೆ Becoming Babasaheb: The Life and Times of Bhimrao Ramji Ambedkar (Volume 1): Birth to Mahad (1891-1929) ಪುಸ್ತಕದ ಕನ್ನಡ ಅವತರಿಣಿಕೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಅನೇಕ ಜೀವನ ಚಿತ್ರಣಗಳು ಹೊರಬಂದಿವೆ. ಆದರೆ ಅವರ ವ್ಯಕ್ತಿಗತ ಬೆಳವಣಿಗೆಯನ್ನು ಕ್ರಮಬದ್ಧವಾಗಿ ಮಂಡಿಸುವ ಹಾಗೂ ಆಧುನಿಕ ಭಾರತದ ಮೇಲೆ ಅವರು ಉಂಟುಮಾಡಿದ ಪರಿಣಾಮವನ್ನು ಪ್ರಸ್ತುತಪಡಿಸುವ ಕೃತಿಗಳ ಸಂಖ್ಯೆ ತೀರಾ ಕಡಿಮೆ. ಈ ಪುಸ್ತಕವು ಬಾಬಾಸಾಹೇಬರ ಬದುಕನ್ನು ಹೊಸತಾಗಿ ನಿರೂಪಿಸುತ್ತದೆ. ಅವರ ವ್ಯಕ್ತಿತ್ವವನ್ನು ವಸ್ತುನಿಷ್ಠವಾಗಿ ನೋಡಲೆತ್ನಿಸುತ್ತದೆ. ಎರಡು ಸಂಪುಟಗಳಲ್ಲಿ ರೂಪುಗೊಂಡಿರುವ ಅಂಬೇಡ್ಕರ್ ಬದುಕಿನ ವಿವರಗಳ ಮೊದಲ ಭಾಗ ಈ ಕೃತಿ. ಇಲ್ಲಿ 1891ರಿಂದ ಮೊದಲ್ಗೊಂಡು 1927ರ ತನಕದ ಬಾಬಾಸಾಹೇಬರ ಬದುಕಿನ ದಾಖಲೆ ಇದೆ. ಅಂದರೆ ಹುಟ್ಟಿನಿಂದ ಮಹಾಡ್ ಹೋರಾಟದವರೆಗಿನ ಅವರ ಬದುಕಿನ ಘಟನೆಗಳ ಚಿತ್ರಣ.
ಅಂಬೇಡರ್ ಚಿಂತನೆಗೆ ಒಂದು ಅಚ್ಚುಕಟ್ಟುತನವಿದೆ: ಕಲಾತ್ಮಕ ಆಯಾಮವಿದೆ. ಈ ಚಿಂತನೆಯ ಸ್ವಾಯತ್ತತೆಯನ್ನು ಇಂಡಿಯಾದ ವಿದ್ವತ್ ವಲಯ ಎಷ್ಟರಮಟ್ಟಿಗೆ ಮಾನ್ಯ ಮಾಡಿದೆ ಎನ್ನುವುದು ದೊಡ್ಡ ಪ್ರಶ್ನೆ. ಈ ನಿಟ್ಟಿನಲ್ಲಿ ಆಕಾಶ್‌ಸಿಂಗ್ ಅವರ ಪುಸ್ತಕವು ಎಡ ಬಲ ನಡು ಎನ್ನದೆ ಬಾಬಾಸಾಹೇಬರ ಅಪ್ರಾಪ್ರಿಯೇಷನ್‌ನಲ್ಲಿ ಮುಳುಗಿರುವ ವಿವಿಧ ಸವರ್ಣೀಯ ಗುಂಪುಗಳಿಗೆ ನೀಡಿರುವ ಬಲವಾದ ಪೆಟ್ಟು. ಮುಖ್ಯವಾಗಿ ಬಲಪಂಥೀಯರ ಅಂಬೇಡ್ಕರ್ ಅಪ್ರಾಪ್ರಿಯೇಷನ್ ಯತ್ನಗಳನ್ನು ಆಕಾಶ್ ಸಿಂಗ್ ಯಶಸ್ವಿಯಾಗಿ ವಿಫಲಗೊಳಿಸಿದ್ದಾರೆ. ಹಾಗೆಯೇ ಅಂಬೇಡ್ಕರ್ ಚಿಂತನೆಗೆ ಊನ ಬಾರದಂತೆ ಈ ಕಥನವನ್ನು ಒಂದು ಬಿಗಿಯಾದ ಬಂಧದಲ್ಲಿ ನಿರೂಪಿಸಿದ್ದಾರೆ. ಈ ಪುಸ್ತಕ ಬಾಬಾಸಾಹೇಬರ ವ್ಯಕ್ತಿಚಿತ್ರವನ್ನು ಕಟ್ಟಿಕೊಡಲು ಯತ್ನಿಸುತ್ತಲೇ ಅವರು ಬದುಕಿದ್ದ ಕಾಲಘಟ್ಟದ ಚರಿತ್ರೆಯನ್ನೂ ಸೊಗಸಾಗಿ ಮಂಡಿಸುತ್ತದೆ.
Other Details
| author | Aakash Singh Rathore |
|---|---|
| Publisher | Akruti Pustaka |
| Categories | Non-Fiction, Shop All Non-Fiction, Biographies & Memoirs, History & Politics |
| SKU | SKU-F0FCA918 |
Customer Reviews
Please log in to write a review.
Log InReviews (0)
No reviews yet. Be the first to review this product!