Free shipping on orders above ₹499
✨ Freedom sale is live — Extra 15% offUse code FREEDOM15 at checkout•Easy returns & secure payments
WELCOME TO
Bookcircle.in
Dr. H.S. Sathyanarayana

ಕಾರಂತ ಅನಂತ-ದಿಗಂತ: ಕೆ. ಶಿವರಾಮ ಕಾರಂತ ವ್ಯಕ್ತಿ - ವ್ಯಕ್ತಿತ್ವ - ಪ್ರಸಂಗಗಳು Karantha Ananta-Diganta: K. Shivarama Karantha Vyakti - Vyaktitva - Prasangagalu

₹180.00 ₹200.00 SAVE ₹20

Inclusive of all taxes

In Stock and ready to ship
Enquire on WhatsApp

Product Description

ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಭಾಷೆಗಳಲ್ಲಿಯೂ ಕಾರಂತರಂತಹ ಬಹುಮುಖ ಪ್ರತಿಭೆಗಳು ವಿರಳ, ವಿಶ್ವಮಟ್ಟದ ಮಾನ್ಯತೆಗೆ ಅರ್ಹವಾದ ಪ್ರತಿಭೆ, ವೈಜ್ಞಾನಿಕ ಮನೋಭಾವದ ಶುದ್ದ ಬುದ್ಧಿಜೀವಿ, ನುಡಿದಂತೆ ನಡೆದ ಅಪರೂಪದ ವ್ಯಕ್ತಿತ್ವ- ಇವೆಲ್ಲವೂ ಕಾರಂತರನ್ನು ಅನನ್ಯರನ್ನಾಗಿ ಮಾಡಿವೆ. ಅವರು ಯಾವ ಕ್ಷೇತ್ರದಲ್ಲೇ ಕೆಲಸ ಮಾಡಿದರೂ, ತಮ್ಮದೇ ಆದ ನಿಲುವಿನೊಂದಿಗೆ, ಬಹುತೇಕ ಒಂಟಿ ಸಲಗದಂತೆ ಸಾಗಿದರು. ಮುಖವಾಡಗಳಿಲ್ಲದ ಸರಳ ಬದುಕು, ನೇರ ನುಡಿ, ರಾಜಿಯಿಲ್ಲದ ಸತ್ಯನಿಷ್ಠೆ ಮತ್ತು ಆತ್ಮಗೌರವ- ಇವು ಅವರ ವ್ಯಕ್ತಿತ್ವದ ಮೂಲಗುಣಗಳು, ಒಂದರ್ಥದಲ್ಲಿ ಅವರದು ಕಡಲಿನಷ್ಟು ವಿಶಾಲವಾದ ವ್ಯಕ್ತಿತ್ವ.

ಕಾರಂತರಂತಹ ವಿರಾಟ್ ವ್ಯಕ್ತಿತ್ವವನ್ನು ಒಂದು ಪುಟ್ಟ ಪುಸ್ತಕದ ಚೌಕಟ್ಟಿನಲ್ಲಿ ಸಂಪೂರ್ಣವಾಗಿ ಪರಿಚಯಿಸುವುದು ಅಸಾಧ್ಯದ ಕೆಲಸ. ಈ ಕೃತಿ ಅವರ ಸಮಗ್ರ ಜೀವನಗಾಥೆಯಲ್ಲ; ಅವರ ವ್ಯಕ್ತಿತ್ವದ ಕೆಲವು ಪ್ರಮುಖ ಮಗ್ಗಲುಗಳನ್ನು, ಕೆಲವು ಅರ್ಥಪೂರ್ಣ ಪ್ರಸಂಗಗಳನ್ನು ಮತ್ತು ಅವರ ಸಾಧನೆಯ ವೈಶಾಲ್ಯವನ್ನು ಓದುಗರಿಗೆ ಪರಿಚಯಿಸುವ ಒಂದು ವಿನಮ್ರ ಪ್ರಯತ್ನ ಮಾತ್ರ. ಈ ಯತ್ನವು ಓದುಗರಲ್ಲಿ ಕಾರಂತರ ಕೃತಿಗಳನ್ನೂ, ಅವರ ಜೀವನವನ್ನೂ ಇನ್ನಷ್ಟು ಆಳವಾಗಿ ಅರಿಯುವ ಕುತೂಹಲವನ್ನು ಹುಟ್ಟಿಸಿದರೆ, ಈ ಕೃತಿಯ ಉದ್ದೇಶ ಸಾರ್ಥಕವಾದಂತೆಯೇ.

~ಡಾ. ಎಚ್. ಎಸ್. ಸತ್ಯನಾರಾಯಣ

Other Details

author Dr. H.S. Sathyanarayana
Publisher Amulya Pustaka
Categories Non-Fiction, Shop All Non-Fiction, Biographies & Memoirs, Kannada Literature
SKU SKU-9D134CE0

Customer Reviews

Please log in to write a review.

Log In

Reviews (0)

No reviews yet. Be the first to review this product!

₹180.00 ಕಾರಂತ ಅನಂತ-ದಿಗಂತ: ಕೆ. ಶಿವರಾಮ ಕಾರಂತ ವ್ಯಕ್ತಿ - ವ್ಯಕ್ತಿತ್ವ - ಪ್ರಸಂಗಗಳು Karantha Ananta-Diganta: K. Shivarama Karantha Vyakti - Vyaktitva - Prasangagalu