Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
B G L Swamy

ಹಸುರು ಹೊನ್ನು Hasuru Honnu By B G L Swamy, ಬಿ ಜಿ ಎಲ್ ಸ್ವಾಮಿ

₹382.00 ₹425.00 SAVE ₹43

Inclusive of all taxes

In Stock and ready to ship
Enquire on WhatsApp

Product Description

’ಹಸುರು ಹೊನ್ನು’ ಕೃತಿಯ ಮೂಲಕ ಲೇಖಕರು ತಮ್ಮ ಬದುಕಿನೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಡನಾಡಿಗಳಾಗಿ ಬೆಳೆದು ಬಂದಿರುವ ಗಿಡಮರಗಳ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಪ್ರವಾಸ ಕಥನ. ಸಸ್ಯಶಾಸ್ತ್ರ ಪ್ರಾಧ್ಯಾಪಕರಾದ ಸ್ವಾಮಿಯವರು ತಮ್ಮಲ್ಲಿ ವ್ಯಾಸಂಗ ಮಾಡುತ್ತಿದ್ದ ಸಸ್ಯಶಾಸ್ತ್ರ ವಿದ್ಯಾರ್ಥಿಗಳ ಶಿಕ್ಷಣದ ಅಗತ್ಯಗಳಲ್ಲೊಂದನ್ನು ಪೂರೈಸುವುದಕ್ಕಾಗಿ ಅವರನ್ನು ಕರೆದುಕೊಂಡು ದೂರದೂರದ ಅರಣ್ಯಗಳಿಗೆ ಹೋಗಿಬಂದುದರ ಕಥೆ ಇದು. ದೂರ ಪ್ರವಾಸಕ್ಕಾಗಿ ಮಾಡಿಕೊಳ್ಳುವ ಸಿದ್ಧತೆಗಳು, ಪ್ರಯಾಣದ ಕಷ್ಟಸುಖಗಳು, ಮಾರ್ಗಮಧ್ಯ, ಅನಿರೀಕ್ಷಿತವಾಗಿ ಜರುಗುವ ಆಕಸ್ಮಿಕ ಘಟನೆಗಳು, ದಾರಿಯುದ್ದಕ್ಕೂ ಕಂಡು ಆನಂದಿಸಿದ ಪ್ರಕೃತಿಯ ಸೊಬಗು, ಸಂಗಡಿಗರಾದ ವಿದ್ಯಾರ್ಥಿಗಳ ಹಾಗೂ ದಾರಿಯಲ್ಲಿ ಸಂಧಿಸಿದ ಆಗಂತುಕರ ಓರೆಕೋರೆಗಳು - ಇದೆಲ್ಲವನ್ನೂ ರಸವತ್ತಾಗಿ ಮತ್ತು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಮನುಷ್ಯ ಸ್ವಭಾವದ ನಿಕಟ ಪರಿಚಯವೂ ಮಾನವ ಸಹಜ ದೌರ್ಬಲ್ಯಗಳ ಬಗ್ಗೆ ಸಹಾನುಭೂತಿಯೂ ಅವರ ಬರವಣಿಗೆಯಲ್ಲಿ ಸ್ಪಷ್ಟವಾಗಿದೆ.

ಇದರ 400 ಪುಟಗಳಲ್ಲಿ ನೂರಾರು ಸಸ್ಯಗಳು ನಮಗೆ ಪರಿಚಿತವಾಗುತ್ತವೆ. ಚಿರಪರಿಚಿತವೆಂದು ನಾವು ಭಾವಿಸಿರುವ ಹಲಸಿನ ಮರ, ಅರಳಿ ಮರ, ಮೆಣಸಿನಕಾಯಿ ಗಿಡಗಳು ಇದುವರೆಗೂ ನಮಗೆ ಅಪರಿಚಿತವಾಗಿದ್ದುವೆಂಬುದು ನಮ್ಮ ಅರಿವಿಗೆ ಬರುತ್ತದೆ. ಸಸ್ಯಗಳ ವರ್ಗಿಕರಣ, ಅದರಲ್ಲಿ ನಿರ್ದಿಷ್ಟ ಸಸ್ಯದ ಸ್ಥಾನ, ಅದನ್ನು ಗುರುತಿಸಲು ನೆರವಾಗುವ ಅದರ ಬಾಹ್ಯ ಲಕ್ಷಣಗಳು, ಅದರ ಜೀವನ ಕ್ರಮ, ಅದು ಮನೆ ಮಾಡಿಕೊಂಡಿರುವ ಭೂಪ್ರದೇಶ, ತಿಂಡಿ ತೀರ್ಥಗಳಲ್ಲಿ ವೈದ್ಯದಲ್ಲಿ ಮತ್ತು ದೇಶದ ಆರ್ಥಿಕ ಜೀವನದಲ್ಲಿ ಅವರ ಪಾತ್ರ ಎಲ್ಲವನ್ನೂ ಸರಳವಾದ ಭಾಷೆಯಲ್ಲಿ ವಿವರಿಸಿದ್ದಾರೆ. ವಿಷಯ ಮನದಟ್ಟಾಗಲು ಅಗತ್ಯವೆನಿಸುವ ಚಿತ್ರಗಳನ್ನು ಲೇಖಕರೇ ಒದಗಿಸಿದ್ದಾರೆ.

Other Details

author B G L Swamy
Publisher Vasantha Prakashana
Categories Non-Fiction, Shop All Non-Fiction, Science, Nature & Technology
SKU Q2131

Customer Reviews

Please log in to write a review.

Log In

Reviews (0)

No reviews yet. Be the first to review this product!

₹382.00 ಹಸುರು ಹೊನ್ನು Hasuru Honnu By B G L Swamy, ಬಿ ಜಿ ಎಲ್ ಸ್ವಾಮಿ