Free shipping on orders above ₹499
✨ Freedom sale is live — Extra 15% offUse code FREEDOM15 at checkout•Easy returns & secure payments
WELCOME TO
Bookcircle.in
H G Rajesh

ಬೆಂಗಳೂರು ಕೆಂಪೇಗೌಡ ಮತ್ತು ಯಲಹಂಕ ನಾಡಪ್ರಭುಗಳು | Bengaluru Kempegowda and Yalahanka Nadaprabhugalu by ಹಂ ಗು ರಾಜೇಶ್ , H G Rajesh

₹225.00 ₹250.00 SAVE ₹25

Inclusive of all taxes

In Stock and ready to ship
Enquire on WhatsApp

Product Description

ಅಧಿರಾಜರಾದ ಹಿರಿಯ ಕುಳಗಳು ಸಾಮಂತರಾದ ಕಿರಿಯ ಕುಳಗಳಿಗೆ ನೀಡಿದ ಉಪದ್ರವದ ವಿರುದ್ಧ ಬಂಡೆದ್ದು ತೋರಿದ ಪ್ರತಿಭಟನೆಯನ್ನೇ ನಕಾರಾತ್ಮಕವಾಗಿ ಚಿತ್ರಿಸಲು ಹಿರಿಯ ಕುಳಗಳು ಸೃಷ್ಟಿಸಿದ ಪರಿಭಾಷೆಯೇ ‘ಕಿರುಕುಳ’! ಇದು ಹಿರಿಯ ಕುಳಗಳು ಕಿರಿಯ ಕುಳಗಳನ್ನು ನಿರ್ವಚಿಸಿದ ಬಗೆ. ಉಳ್ಳವರದೇ ಚರಿತ್ರೆಯಾದ್ದರಿಂದ ಹಿರಿಯ ಕುಳಗಳ ಕಣೋಟದಲ್ಲಿ ಚರಿತ್ರೆಯನ್ನು ಕಟ್ಟಿಕೊಡಲು ಕಿರಿಯ ಕುಳಗಳನ್ನು ವಿಘ್ನ ಸಂತೋಷಿಗಳು. ಪ್ರಜಾ ಪೀಡಕರು, ಬಂಡುಕೋರರು ಎಂಬಂತೆ ಶಿಷ್ಟ ಸಾಹಿತ್ಯಗಳಲ್ಲಿ ಚಿತ್ರಿಸಲಾಗಿದೆ. ಆದರೆ ಜನಸಾಮಾನ್ಯರಿಗೆ ಹತ್ತಿರವಾಗಿದ್ದ ಕಿರಿಯ ಕುಳಗಳಿಗೆ ಹಿರಿಯ ಕುಳಗಳು ನೀಡಿದ ಉಪದ್ರವಗಳು ಮಾತ್ರ ಎಲ್ಲಿಯೂ ದಾಖಲಾಗದೆ ಉಳಿದವು. ಅಧಿರಾಜರ ಆಸ್ಥಾನದ ಪಂಡಿತೋತ್ತಮರು ಉಪ್ಪಿನ ಋಣಕ್ಕಾಗಿ ತಮ್ಮ ಆಶ್ರಯದಾತನ ಕುಕೃತ್ಯಗಳನ್ನೂ ತಮ್ಮ ಪಾಂಡಿತ್ಯ ಪ್ರತಿಭೆಯ ಮೂಲಕ ಮಹಾನ್ ಸಾಧನೆ ಎಂಬಂತೆಯೂ, ಕಿರಿಯ ಕುಳಗಳ ಪ್ರತಿಭಟನೆಯನ್ನು ನಕಾರಾತ್ಮಕವಾಗಿಯೂ ಚಿತ್ರಿಸುತ್ತಾರೆ. ಆದರೆ ಅದರ ನೋವುಂಡ ಜನಪದರಲ್ಲಿ ಕಹಿ ಅನುಭವಗಳು ಹೆಪ್ಪುಗಟ್ಟಿರುತ್ತವೆ. ಆದ್ದರಿಂದಲೇ ಜನಪದರಿಗೆ ವಿಜಯನಗರದ ಸಾಮ್ರಾಟನಾದ ಕೃಷ್ಣದೇವರಾಯನಿಗಿಂತ ಕಂಪಲಿಯ ಕುಮಾರರಾಮ, ಬೆಂಗಳೂರು ಕೆಂಪೇಗೌಡ ಮುಖ್ಯರಾಗುತ್ತಾರೆ. ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಇಂತಹ ಹತ್ತಾರು ಸಾಮಂತ ಅರಸರ ಬಗೆಗೆ ಜಾನಪದ ಕಥನಗಳು, ಲಾವಣಿಗಳು ಇವೆಯೇ ವಿನಃ ಅವರ ಅಧಿರಾಜರ ಬಗೆಗೆ ಅಲ್ಲ.

ಪ್ರಸ್ತುತ ಕೃತಿಯು ಈ ನಿಟ್ಟಿನಲ್ಲಿ ವಿಜಯನಗರ ಸಾಮ್ರಾಟರ ಅಧೀನದಲ್ಲಿ ಆಳಿದ ಯಲಹಂಕ ನಾಡಪ್ರಭುಗಳ ಇತಿಹಾಸವನ್ನೂ ನಿರ್ವಚಿಸಲು ಪ್ರಯತ್ನಿಸಿದೆ.

Other Details

author H G Rajesh
Publisher Ithihasa Dharpana Prakashana
Categories Non-Fiction, Shop All Non-Fiction, History & Politics
SKU SKU-B6DEFA10

Customer Reviews

Please log in to write a review.

Log In

Reviews (0)

No reviews yet. Be the first to review this product!

₹225.00 ಬೆಂಗಳೂರು ಕೆಂಪೇಗೌಡ ಮತ್ತು ಯಲಹಂಕ ನಾಡಪ್ರಭುಗಳು | Bengaluru Kempegowda and Yalahanka Nadaprabhugalu by ಹಂ ಗು ರಾಜೇಶ್ , H G Rajesh