ಟೀಕೆ ಟಿಪ್ಪಣಿ- 1,2&3 ಸಂಪುಟಗಳು
Inclusive of all taxes
Product Description
ಒಮ್ಮೆ ಲಂಕೇಶ್ ತಮ್ಮನ್ನು ‘ಲೋಹಿಯೈಟ್ ಸೋಷಲಿಸ್ಟ್’ ಎಂದು ವಿವರಿಸಿಕೊಂಡಿದ್ದರು. 1956-1967ರ ನಡುವೆ ಭಾರತದ ಶ್ರೇಷ್ಠ ಸಮಾಜವಾದಿ ಚಿಂತಕ-ನಾಯಕ ರಾಮಮನೋಹರ ಲೋಹಿಯಾ ‘ಮ್ಯಾನ್ ಕೈಂಡ್’ ಪತ್ರಿಕೆಗೆ ಬರೆದ ‘ನೋಟ್ಸ್ ಅಂಡ್ ಕಾಮೆಂಟ್ಸ್’ ಅಂಕಣದಂತೆಯೇ ಲಂಕೇಶರು 1980-200೦ದ ನಡುವೆ ಬರೆದ ‘ಟೀಕೆ ಟಿಪ್ಪಣಿ’ಗಳು ಲೋಹಿಯಾ ನಂತರದ ಭಾರತದ ಹಾಗೂ ಕರ್ನಾಟಕದ ಸಮಾಜವಾದಿ ಚಿಂತನೆಯನ್ನು ರೂಪಿಸಲೆತ್ನಿಸಿವೆ. ಇವತ್ತು ಬರೆಯಲು ಕಲಿಯುವ ಹೊಸ ಹುಡುಗ ಹುಡುಗಿಯರಿಗಷ್ಟೇ ಅಲ್ಲ, ಹಿರಿಯ ಕಿರಿಯ ಲೇಖಕರೆಲ್ಲರಿಗೂ ಕನ್ನಡ ಗದ್ಯದ ಪಾರದರ್ಶಕತೆ, ತೀಕ್ಷತೆ, ಜೀವಂತಿಕೆ ಹಾಗೂ ನೈತಿಕ ಬಳಕೆಯ ಪಾಠಗಳನ್ನು ನಿತ್ಯ ಹೇಳಿಕೊಡಬಲ್ಲ ಅನನ್ಯ ಬರಹಗಳಿವು.
ನಟರಾಜ್ ಹುಳಿಯಾರ್
ಅಂಕಣ ಬರೆಯುವವ ಅಮರತ್ನದ ಜೊತೆಗೆ ಹುಡುಗಾಟ ಆಡುವವ. ಆತ ತನ್ನ ಸುತ್ತಣ ಬದುಕನ್ನು ಕಂಡು ಹುಮ್ಮಸ್ಸುಗೊಂಡು ಬರೆಯುತ್ತಾನೆ; ಈ ಹುಮ್ಮಸ್ಸನ್ನು ‘ಸ್ಫೂರ್ತಿ’ ಅನ್ನುವುದಕ್ಕೆ ಕೂಡ ಹಿಂಜರಿಯುತ್ತಾನೆ. ಬುದ್ಧಿಜೀವಿಯಂತೆ ಸಂಕೀರ್ಣವಾಗಿ ಬರೆಯುವುದಾಗಲಿ, ಕವಿಯಂತೆ ಭವಿಷ್ಯದ ಜನಾಂಗಕ್ಕೆ ಬರೆಯುವುದಾಗಲಿ ಅಂಕಣಕಾರನಿಗೆ ಸಾಧ್ಯವಾಗುವುದಿಲ್ಲ; ಇವತ್ತಿನ ಭಾಷೆಯಲ್ಲಿ ಬರೆದು ಓದುಗರ ಆಸಕ್ತಿ ಕೆರಳಿಸದಿದ್ದರೆ ಎಲ್ಲ ವ್ಯರ್ಥವಾಗುತ್ತದೆ. ಅಂಕಣದ ಆರಂಭದಲ್ಲಿ ಅನ್ವೇಷಣೆಯಾದದ್ದು ಕ್ರಮೇಣ ಅಂಕಣಗಾರನ ಶೈಲಿಯಾದಾಗಲೂ ಜೀವಂತಿಕೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಈ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದವನು ಉತ್ತಮ ಕತೆ, ಕಾದಂಬರಿಕಾರರಷ್ಟೇ ಅರ್ಥಪೂರ್ಣವಾಗುತ್ತಾನೆ.
ಈ ಬರವಣಿಗೆಯ ಪರಿಣಾಮ…. ಒಮ್ಮೆಯೂ ನಾನು ಕಾಯಿಲೆ ಯಿಂದ ಮಲಗಲಿಲ್ಲ. ಇದಕ್ಕೆ ಮುಖ್ಯ ಕಾರಣ, ಈ ಅವಧಿಯಲ್ಲಿ ನನಗೆ ಸಿಕ್ಕ ನೆಮ್ಮದಿ ಮತ್ತು ಮಾನಸಿಕ ಚೈತನ್ಯ. ವಾರದಿಂದ ವಾರಕ್ಕೆ ಓದುಗರ ಕಾತರ, ನಿರೀಕ್ಷೆಯನ್ನು ಸ್ವಾಗತಿಸುತ್ತ, ಹೆಚ್ಚಿಸುತ್ತಾ, ಅವರ ಬಗ್ಗೆ ನನಗಿರುವ ಹೊಣೆಯನ್ನರಿತು ಬರೆಯುತ್ತ ಹೋದೆ; ನಾನೇ ಬೆಳೆಯುತ್ತ ಹೋದೆ ಎಂದು ತಿಳಿಯುತ್ತೇನೆ. ಈ ನನ್ನ- ಓದುಗರ ಸಂಬಂಧದ ಫಲ ನಿಮ್ಮೆದುರಿಗಿದೆ.
ಪಿ.ಲಂಕೇಶ್
Other Details
| author | P Lankesh |
|---|---|
| Publisher | Lankesh Prakashana |
| Categories | Non-Fiction, Shop All Non-Fiction, History & Politics |
| SKU | SKU-B7B6DA3D |
Customer Reviews
Please log in to write a review.
Log InReviews (0)
No reviews yet. Be the first to review this product!