1 / 1
Various Authors
ಆರ್ ಎಸ್ ಎಸ್ ಒಳಗು ಹೊರಗು | RSS Olagu Horagu by ಡಾ ದತ್ತಪ್ರಸಾದ್ ದಾಭೋಲ್ಕರ್, Dr. Dattaprasad Dabholkar
₹175.00
₹195.00
SAVE ₹20
Inclusive of all taxes
Product Description
ದೇಶಭಕ್ತಿಯ ವಾರಸುದಾರರು ತಾವೇ ಎಂಬ ಸ್ವಯಂ ಘೋಷಣೆಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅನೇಕ ವರ್ಷಗಳಿಂದ ತಥಾಕಥಿತ ಭಾರತೀಯ ಸಂಸ್ಕೃತಿಯ ಪ್ರಚಾರದಲ್ಲಿ ತೊಡಗಿದೆ. ಸಂಸ್ಕೃತಿಯೆಂದರೆ ಯಾರನ್ನೋ ದ್ವೇಷಿಸುವುದಲ್ಲ ಎಂಬ ಸೂತ್ರವು ಆರೆಸ್ಸೆಸ್‌ಗೆ ಮಾನ್ಯವಲ್ಲ. ಇತಿಹಾಸದ ಚಲನೆಯಲ್ಲಿ ಕಾಲದಿಂದ ಕಾಲಕ್ಕೆ ಎಷ್ಟೋ ಬದಲಾವಣೆಗಳಾಗುತ್ತಿರುತ್ತವೆ. ಅವುಗಳಲ್ಲಿ ಅಪಥ್ಯವಾದುವನ್ನು ತ್ಯಜಿಸಿ ಪರಂಪರೆಯಲ್ಲಿ ಸದ್ಧತ್ತಿಯೆಂದು ಸ್ವೀಕೃತವಾಗಿರುವ ಮೌಲ್ಯಗಳನ್ನು ಪೋಷಿಸಬೇಕಾದ್ದು ಸಹಜ ಕ್ರಿಯೆ. ಒಂದು ಕಾಲದಲ್ಲಿ ಆರೆಸ್ಸೆಸ್ ಸಂಸ್ಥೆಯು ನಮ್ಮ ದೇಶದ ಸಂವಿಧಾನವನ್ನು ಸಹ ಉಪೇಕ್ಷೆಗೆ ಗುರಿಮಾಡಿ ಡಾ|| ಬಾಬಾಸಾಹೇಬ್ ಅಂಬೇಡ್ಕರರ ಅಧ್ಯಕ್ಷತೆಯಲ್ಲಿ ರೂಪುಗೊಂಡ ಸಂವಿಧಾನವನ್ನು ತಿರಸ್ಕಾರ ಭಾವದಿಂದ ನೋಡಿ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತ್ಯಾಜ್ಯವೆನಿಸಿಕೊಳ್ಳಬೇಕಾದ ಹಲವು ಪ್ರಕ್ರಿಯೆಗಳನ್ನು ಮೌಲಿಕವೆಂದು ಸಂಭ್ರಮಿಸಿತ್ತು. ವಿವೇಕಾನಂದರಂತಹ ಸಂತನ, ಯುವಜನಾಂಗದ ಮಾರ್ಗದರ್ಶಿಯ, ಮಾತುಗಳಿಗೆ ತನ್ನದೇ ವಿಕೃತ ಭಾಷ್ಯವನ್ನು ಪ್ರಚುರಗೊಳಿಸಿ ವಿಷವೃಕ್ಷವನ್ನು ಬೆಳೆಸುವ ನಿಂದನೀಯ ಕಾರ್ಯದಲ್ಲಿ ಆರೆಸ್ಸೆಸ್ ಭಾಗಿಯಾಗಿದ್ದೂ ಉಂಟು.
ನೈಜವಾಗಿ ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಮೌಲ್ಯಯುತ ಅಂಶಗಳನ್ನು ತಿಳಿದು. ಅದರ ಪ್ರೇರಣೆಯಿಂದ ನಮ್ಮ ದೇಶವು ಸುಕೃತದ ಹಾದಿಯಲ್ಲಿ ಮುನ್ನಡೆಯ ಬೇಕಾಗಿದೆ. ದತ್ತಪ್ರಸಾದ ದಾಭೋಲ್ಕರ್, ವಿವೇಕಾನಂದ ಮುಂತಾದ ದ್ರಷ್ಟಾರರ ಇಂಗಿತವನ್ನು ಮನಮುಟ್ಟುವಂತೆ ಪರಿಚಯಿಸಿ, ವಸ್ತುನಿಷ್ಠವಾದ ಕೃತಿಯೊಂದನ್ನು ನೀಡಿದ್ದಾರೆ. ಓದುಗರಿಗೆ ಮತ್ತು ಯುವಜನತೆಗೆ ಸಾಂಸ್ಕೃತಿಕ ಋಜುಮಾರ್ಗವನ್ನು ತಿಳಿಯಲು ಮತ್ತು ಪಾಲಿಸಲು ಪ್ರಸ್ತುತ ಗ್ರಂಥವು ಬಹಳ ಉಪಯುಕ್ತವಾದ ಆಕರ ಗ್ರಂಥವಾಗಿದೆ. ನಮ್ಮ ದೇಶದ ಹಿರಿಮೆಯನ್ನು ಹೃದ್ಯವಾಗಿ ನಿರೂಪಿಸುವ ಈ ಗ್ರಂಥವನ್ನು ಕನ್ನಡನಾಡಿನ ಓದುಗರು ಹಾರ್ದಿಕವಾಗಿ ಸ್ವಾಗತಿಸುತ್ತಾರೆಂದು ಭಾವಿಸಲಾಗಿದೆ.
– ಜಿ. ರಾಮಕೃಷ್ಣ
Other Details
| author | Various Authors |
|---|---|
| Publisher | Navakarnataka Publications |
| Categories | Non-Fiction, Shop All Non-Fiction, History & Politics |
| SKU | 2778785 |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹175.00
ಆರ್ ಎಸ್ ಎಸ್ ಒಳಗು ಹೊರಗು | RSS Olagu Horagu by ಡಾ ದತ್ತಪ್ರಸಾದ್ ದಾಭೋಲ್ಕರ್, Dr. Dattaprasad Dabholkar