Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Raghav Vishwasi

ನನ್ ಮದ್ವೆ ಫಿಕ್ಸಾಯ್ತು : ಮುಯ್ಯಿ ಫಸ್ಟ್ ಊಟ ನೆಕ್ಸ್ಟ್ | Nann Maduve Fixaaytu By ರಾಘವ್ ವಿಶ್ವಾಸಿ, Raghav Vishwasi

₹166.00 ₹195.00 SAVE ₹29

Inclusive of all taxes

In Stock and ready to ship
Enquire on WhatsApp

Product Description

;ಹೌ ಟು ಗೆಟ್ ಮ್ಯಾರೀಡ್ ? ಅನ್ನೋದು ಇಂದಿನ ಸಮಾಜದಲ್ಲಿ ದೊಡ್ಡ ತಲೆನೋವಾಗಿರೋದಂತೂ ನಿಜ, ಹಾಗಂತ ಜನ ಮದ್ದೆನೇ ಆಗ್ತಾ ಇಲ್ವಾ? ಎಲ್ಲ ಸರಿಯಿರುವವರಿಗೆ ಹೆಣ್ಣು ಸಿಗೋದು ಕಷ್ಟವಾಗಿರುವಾಗ ಆರ್ಥಿಕವಾಗಿ ಬಲಹೀನವಾದ ಹುಡುಗನಿಗೆ ಹೆಣ್ಣು ಸಿಕ್ಕಿ ಮದ್ಯೆ ಆಗಬೇಕು ಅಂದ್ರೆ ಬ್ರಹ್ಮದೇವನೇ ಸ್ವತಃ ಬಂದು ಒಂದು ಹೆಣ್ಣನ್ನು ಸೃಷ್ಟಿಸಿ ತಾನೇ ಮುಂದೆ ನಿಂತು ಧಾರೆ ಎರೆದು ಕೊಡಬೇಕು. ಗುಣದಲ್ಲಿ "ಕಲಿಯುಗದ ದೇವ ಮಾನವ ಅಭಿನವ ಶ್ರೀರಾಮಚಂದ್ರ" ಎಂದು ಹೆಮ್ಮೆಯಿಂದ ಹೇಳಿಕೊಂಡು ತಿರುಗುವ ನಮ್ಮ ಕಥಾನಾಯಕನಿಗೆ ಹೆಣ್ಣು ಹುಡುಕಿ ಮದ್ಯೆ ಆಗುವಷ್ಟರಲ್ಲಿ ಎಷ್ಟೆಲ್ಲಾ ಪಾಡು ಪಡಬೇಕಾಗುತ್ತದೆ ಎನ್ನುವುದೇ ಕಥಾಹಂದರ. ನಾಯಕ ಗೋಪಿ, ಅವನಿಗೊಬ್ಬ ಗುರು ಕೂಡ ಇದ್ದಾರೆ. ಅವರೇ ಲಾಯರ್ ಲಂಕಾಪತಿ, ಹೇಳಬೇಕು ಅಂದ್ರೆ ಇವರಿಬ್ಬರದ್ದು ಚೋರ್ ಗುರು ಚಂಡಾಲ ಶಿಷ್ಯ ಎನ್ನುವ ಬಂಧ. ಇದರ ಜೊತೆಗೆ ಕರ್ಣನಂಥ ಮಿತ್ರ ಕೂಡ ಇದ್ದಾನೆ ಅವನೇ ಕುಬೇರ. ಮಾತೃ ಮೂರ್ತಿಯಾದ ಮಾತಾಜಿ ರೋಹಿಣಿಯವರು ನಾಯಕ ಹೇಳಿದ್ದಕ್ಕೆಲ್ಲ 'ಓಕೇ ಬೇಟಾ' ಎನ್ನುವ ಪದವನ್ನು ಕರತಲಾಮಲಕ ಮಾಡಿಕೊಂಡು ಕಥೆಯುದ್ದಕ್ಕೂ ಮುಂದುವರೆದಿದ್ದಾರೆ. ಮುಗ್ಧ ಅತ್ತೆ ಮಾವ, ಪೆದ್ದು ಹುಡುಗಿ ಹಾಗೆ ಚಾಲಾಕಿ ನಾದಿನಿಯ ಮನವೊಲಿಸಿ ನಮ್ಮ ಹೀರೋ ಹೇಗೆ ಅವನ ಕಲ್ಯಾಣವನ್ನು ಮಾಡಿಕೊಳ್ಳುತ್ತಾನೆ ಅನ್ನೋದು ನಿಮಗೆ ತಿಳಿಯಬೇಕಾ? ಈಗಲೇ ಕಥೆ ಓದಿ ಆದರೆ ಒಂದೇ ವಿನಂತಿ ನಿಮ್ಮಲ್ಲಿ ಯಾರೂ ಸಹ ಕಥಾ ನಾಯಕನ ಹಾಗೆ ಮದ್ಯೆ ವಿಷಯದಲ್ಲಿ ಸಾಹಸ ಮಾಡೋಕೆ ಹೋಗಬೇಡಿ, ಯಾಕಂದ್ರೆ ಅವನಷ್ಟು ಚಾಣಾಕ್ಷ ಇನ್ನೊಬ್ಬನಿಲ್ಲ. ಅಕಸ್ಮಾತ್ ನೀವು ಹಾಗೆ ಮಾಡಿ ಏನಾದರೂ ಎಡವಟ್ಟು ಮಾಡಿಕೊಂಡರೆ ನಮ್ಮ ನಾಯಕನಿಗೆ ಬಯ್ಯುವ ಹಾಗಿಲ್ಲ. ತಪ್ಪದೆ ಗೋಪಿ ಕಲ್ಯಾಣಕ್ಕೆ ಬನ್ನಿ ಆದ್ರೆ ನೆನಪಿರಲಿ ಮುಯ್ಯ ಹಾಕಿದವರಿಗೆ ಮಾತ್ರ ಊಟಕ್ಕೆ ಹಾಕಲಾಗುತ್ತದೆ ಇಲ್ಲದಿದ್ದರೆ ಟಾಟಾ ಬೈ ಬೈ.

Other Details

author Raghav Vishwasi
Publisher Nava Karnataka
Categories Shop All Fiction, Fiction, Romance & Contemporary
SKU SKU-986CEC1A

Customer Reviews

Please log in to write a review.

Log In

Reviews (0)

No reviews yet. Be the first to review this product!

₹166.00 ನನ್ ಮದ್ವೆ ಫಿಕ್ಸಾಯ್ತು : ಮುಯ್ಯಿ ಫಸ್ಟ್ ಊಟ ನೆಕ್ಸ್ಟ್ | Nann Maduve Fixaaytu By ರಾಘವ್ ವಿಶ್ವಾಸಿ, Raghav Vishwasi