1 / 1
Sunanda Kadame
ಸುನಂದಾ ಕಡಮೆ ಕಥೆಗಳು : ನೀರ ಮಣಿಗಳ ಮಾಲೆ | Neera Manigala Maale By Sunanda Kadame
₹162.00
₹180.00
SAVE ₹18
Inclusive of all taxes
Product Description
ಕಾಲ ಬಹಳ ಸುನಂದಾ ಅವರು ಕಥೆಗಳನ್ನ ಬರೆಯತೊಡಗಿದ ನಿರ್ಣಾಯಕವಾದುದು. ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪರಿಸರದದಿಂದ ಹುಬ್ಬಳ್ಳಿ-ಧಾರವಾಡಗಳ ಕಡೆಗೆ ವಿಭಿನ್ನ ಕಾರಣಗಳಿಗಾಗಿ ಚಲಿಸಿದ ಹೆಣ್ಣುಮಕ್ಕಳಿಗೆ ಸಾಹಿತ್ಯಪರಿಸರದಲ್ಲಿ ಒಳಗೊಳ್ಳುವ ಹಲವು ವಲಯಗಳು ಅಲ್ಲಿದ್ದವು. ಸುನಂದಾ ಅವರ ಪುಟ್ಟ ಪಾದಗಳು ಮಾಡಿಕೊಂಡ ಆಯ್ಕೆಗಳು ಅವರು 'ಏನು ಬರೆಯಬೇಕು', 'ಹೇಗೆ ಬರೆಯಬೇಕು?' ಎನ್ನುವ ಪ್ರಶ್ನೆಗಳಿಗೆ ತಮ್ಮದೇ ಆದ ಉತ್ತರಗಳನ್ನು ನೀಡುತ್ತಿದ್ದವು.
ಅದು ಸಾಹಿತ್ಯಕವಾದರೂ 'ಜಡವಾದ' ಅರ್ಥದಲ್ಲಿ ಅಕಡೆಮಿಕ್ ಅಲ್ಲದ ಪರಿಸರ. ಇಂತಹ ಸನ್ನಿವೇಶದಲ್ಲಿ ಸಿದ್ಧಾಂತಗಳಿಗಿಂತ ಸ್ವಾನುಭವ ಮತ್ತು ತಾನು ಓದಿದ ಕಥೆಗಳ ಪ್ರಭಾವ ಮುಖ್ಯವಾಗುತ್ತದೆ.
ನಂತರ ಸ್ತ್ರೀವಾದೀ ಮತ್ತು ಬಂಡಾಯ/ಎಡಪಂಥೀಯ ಚಳುವಳಿಗಳಲ್ಲಿ ತೊಡಗಿಕೊಂಡದ್ದು ಸುನಂದಾ ಅವರ ಕ್ರಿಯಾಶೀಲತೆಯ ದಿಕ್ಕುದೆಸೆಗಳನ್ನು ನಿರ್ಧರಿಸಿತು. ಗೃಹಿಣಿಯಾದವಳು ಸಾರ್ವಜನಿಕ ಜೀವನದಲ್ಲಿ ಅಡಿಯಿಟ್ಟಾಗ ಆ ಎರಡು ನೆಲೆಗಳ ಸಂಯೋಜನೆಯು ಸಾಧ್ಯವಾಗುತ್ತದೆ. ಪಾತ್ರಗಳ 'ಪ್ರಾತಿನಿಧಿಕತೆ" ಮತ್ತು 'ಮಾನುಷಿಕತೆ'ಗಳಲ್ಲಿ ಎರಡನೆಯದೂ ಅಷ್ಟೇ ಮುಖ್ಯವೆಂದು ಅವರು ಮನಗಂಡಿದ್ದಾರೆ. ಆದ್ದರಿಂದಲೇ ಅವರ ಬಹುಪಾಲು ಕಥೆಗಳಲ್ಲಿ 'ನಿಜವಾದ' ಮನುಷ್ಯರು ಬರುತ್ತಾರೆ.
ಎಚ್.ಎಸ್. ರಾಘವೇಂದ್ರ ರಾವ್
Other Details
| author | Sunanda Kadame |
|---|---|
| Publisher | Ladai Prakashana |
| Categories | Shop All Fiction, Fiction |
| SKU | SKU-D776D4FB |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹162.00
ಸುನಂದಾ ಕಡಮೆ ಕಥೆಗಳು : ನೀರ ಮಣಿಗಳ ಮಾಲೆ | Neera Manigala Maale By Sunanda Kadame