ಎಂದೆಂದಿಗೂ ಮುಗಿಯದ ಕತೆಗಳು: ಹೊಸ ಮಕ್ಕಳಿಗೆ ಹಳೆಯ ಮತ್ತು ಹೊಸ ಕತೆಗಳು | Endendigu Mugiyada Kathegalu: Hosa Makkalige Haliya Mattu Hosa Kathegalu
Inclusive of all taxes
Product Description
ಮಹೇಶ್ ಕುಮಾರ್ ಇಲ್ಲಿ ಹೊಸ ನಮೂನೆಯಲ್ಲಿ ಕತೆ ಹೇಳಿ ಹೊಸ ಬೆಳಕು ಬೀರಲು ಯತ್ನಿಸಿದ್ದಾರೆ. ಅದಕ್ಕೆ ಪ್ರಚಲಿತ ಬದುಕಿನ ಪ್ರತಿಮೆಗಳಿಂದ ಕೂಡಿದ ಅವರ ಆಡುಮಾತಿನ ಶೈಲಿ ಉಸಿರಾಟ ನೀಡಿದೆ.
..ಹೀಗೆ ಹಳೆ ಕತೆ ಹೇಳುತ್ತಾ ಹೊಸತನ್ನು ಹೊಳೆಸುವ, ಹೊಸತನ್ನು ಹೊಳೆಸುತ್ತಾ ಓದುವ ಪ್ರತಿ ಎಳೆ ಮನಸ್ಸಿನ ಕಲ್ಪನಾಶೀಲತೆಯ ಕದವನ್ನೂ ತೆರೆಯುವ ಈ ಕತೆಗಳಿಗೆ ಹೊಸ ಹೊಸ ರೆಕ್ಕೆಗಳು ಮೂಡುತ್ತಲೇ ಇರಲಿ.
~ ಜಯಂತ ಕಾಯ್ಕಿಣಿ
ಇದರಲ್ಲಿ ಹಳೆಯ ಕಥೆಗಳನ್ನು ಹೊಸಕಾಲಕ್ಕನುಗುಣವಾಗಿ ಮುರಿದು ಕಟ್ಟಿದ ಕಥೆಗಳಾದ ಇಮ್ಮಡಿ ಕಾಕಭುಸುಂಡಿಯ ಕತೆ, ರಾಮ ಮತ್ತು ಜಿಂಕೆ- ಇವುಗಳ ಜೊತೆಗೆ ಹೊಸವೇ ಆದ, 'ಸರಿಯಾಗಿ ಇರುವುದೆಲ್ಲ ಸರಿಯಾಗಿಯೇ ಇದೆ, 'ಗುಂಪಿಗೆ ಸೇರದ ಪದ' ದಂಥ ಕಥೆಗಳೂ ಇವೆ. ಒಂದು ರೀತಿಯಲ್ಲಿ ಬ್ರೆಕ್ಟ್ ಎಪಿಕ್ ಥಿಯೇಟರ್ನ ಹಾಗೆ ಈ ಕಥೆಗಳನ್ನೋದುವ ಮಕ್ಕಳು ಕಥೆಯ ಪ್ರಪಂಚದೊಂದಿಗೆ ಮೈಮರೆಯದೆ ಒಂದು ಅನುಕೂಲಕರ ದೂರವನ್ನು ಕಾಪಾಡಿಕೊಂಡು ವಿಚಾರಗಳನ್ನು ಗ್ರಹಿಸಿಕೊಂಡು ವೈಚಾರಿಕತೆಯನ್ನು ರೂಢಿಸಿಕೊಳ್ಳಲು ಅನುಕೂಲವಾಗುವಂತಿವೆ ಇವು, ಲವಲವಿಕೆಯ, ಚುರುಕಾದ ಸಂಭಾಷಣೆಗಳಿಂದ ಕೂಡಿರುವ ಇವುಗಳ ಭಾಷೆ ಮಕ್ಕಳಿಗೆ ಪರಿಚಿತವಾಗಿರುವ ದಿನರೂಢಿಯ ಸರಳ, ಲಲಿತ ಕನ್ನಡವೇ ಆಗಿರುವುದು ಈ ಕಥೆಗಳ ವಿಶೇಷ.
~ ಪ್ರೊ. ಆರ್. ಲಕ್ಷ್ಮೀನಾರಾಯಣ.
Other Details
| author | Mahesh Kumar C S |
|---|---|
| Publisher | Amulya Pustaka |
| Categories | Children’s Books, Shop All Children’s Books, Story Books |
| SKU | SKU-2281096E |
Customer Reviews
Please log in to write a review.
Log InReviews (0)
No reviews yet. Be the first to review this product!