Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Chandrappa C

ಅಶೋಕ : ಸತ್ಯ-ಅಹಿಂಸೆಯ ಮಹಾಶಯ | Ashoka : Sathya-Ahimseya Mahashaya By C. Chandrappa, ಚಂದ್ರಪ್ಪ ಸಿ.

₹1,275.00 ₹1,500.00 SAVE ₹225

Inclusive of all taxes

In Stock and ready to ship

Product Description

ಭಾರತೀಯರ ಮನೆ ಮನಗಳಲ್ಲಿ ಜೀವಂತವಾಗಿ ಉಳಿಯುವ ಹಾಗೂ ಎಂದೆಂದಿಗೂ ಆದರ್ಶಪ್ರಾಯವಾದ ರಾಜನೆಂದರೆ ಅಶೋಕ. ಅಶೋಕ ಸ್ತಂಭ ಮತ್ತು ಅಶೋಕ ಚಕ್ರ ಇವು ಭಾರತೀಯ ಪರಂಪರೆಯ ಸಂಕೇತಗಳು, ಭಾರತದ ಇತಿಹಾಸದ ಹೊಸದಿಕ್ಕಿಗೆ ನಾಂದಿ ಹಾಡಿದ ಮಹಾಚೇತನ ಅಶೋಕ. ಇತಿಹಾಸದಲ್ಲಿ ಸರ್ವಕಾಲೀನ ಜನಪ್ರಿಯತೆಗೆ ಕಾರಣ ಎಂಬ ಕುತೂಹಲಕ್ಕೆ ಈ ಸಂಶೋಧನಾ ಗ್ರಂಥದಲ್ಲಿ ಡಾ.ಸಿ.ಚಂದ್ರಪ್ಪ ದಾಖಲಿಸಿದ್ದಾರೆ. ಭಾಷಾಶಾಸ್ತ್ರ, ಶಾಸನಶಾಸ್ತ್ರ, ಭೂಉತ್ಪನನಗಳು, ವಾಸ್ತುಶಿಲ್ಪ ಮುಂತಾದ ಹಲವು ಜ್ಞಾನಶಾಸ್ತ್ರಗಳನ್ನು ಒಳಗೊಂಡ ಅಪರೂಪದ ಕೃತಿಯಾಗಿದೆ.

ಡಾ. ಸಿ. ಚಂದ್ರಪ್ಪ

ಚಕ್ರವರ್ತಿ ಅಶೋಕನ ಸಮಗ್ರ ಇತಿಹಾಸವು ಕನ್ನಡದ ಕನ್ನಡಿಯಲ್ಲಿ ಮೂಡಿ ಬಂದಿಲ್ಲವಾದರೂ ಇತಿಹಾಸ ಪ್ರಾಧ್ಯಾಪಕರಾದ ಡಾ.ಸಿ.ಚಂದ್ರಪ್ಪನವರ ಈ ಕೃತಿ ಅಂಥ ಗಂಭೀರ ಪ್ರಯತ್ನಗಳಲ್ಲೊಂದು. ಅಖಂಡ ಭಾರತವನ್ನು ಕ್ರಿ.ಪೂ. 3ನೇ ಶತಮಾನದಲ್ಲಿ ಆಳಿದ ಅಶೋಕನ ಚರಿತ್ರೆಯನ್ನು ಸಂಶೋಧನೆಯ ಮೂಲಕ ಕನ್ನಡಕ್ಕೆ ತರುವುದು ಸವಾಲಷ್ಟೆ ಅಲ್ಲ. ಅಸಾಧ್ಯವೂ ಆಗಿದೆ. ಹೀಗಾಗಿ ಚಕ್ರವರ್ತಿ ಅಶೋಕನ ಸಮಗ್ರ ಜೀವನ ಚರಿತ್ರೆಯನ್ನು ಕನ್ನಡದ ಓದುಗರ ಕೈಗಿಟ್ಟಿದ್ದಾರೆ. ಈ ದಿಸೆಯಲ್ಲಿ ಪ್ರಾಧ್ಯಾಪಕರಾದ ಡಾ. ಸಿ. ಚಂದ್ರಪ್ಪನವರು ಚರಿತ್ರೆಯ ಒಳನೋಟಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಹಾಗಾಗಿ ಡಾ.ಸಿ.ಚಂದ್ರಪ್ಪನವರನ್ನು ಮನದುಂಬಿ ಹಾರೈಸುತ್ತೇನೆ.

ನಾಡೋಜ ಪ್ರೊ. ಹಂಪ ನಾಗರಾಜಯ್ಯ

ಸಾಮ್ರಾಟ ಅಶೋಕನ ಚರಿತ್ರೆಯೇ ಒಂದು ಮಹಾಕಾವ್ಯ. ಪ್ರಜೆಗಳ ನೈತಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಶ್ರಮಿಸಿದವನು ಚಕ್ರವರ್ತಿ ಅಶೋಕ. ಆತನು ಸತ್ಯ ಅಹಿಂಸೆಯ ಪ್ರತಿಪಾದಕನಷ್ಟೆ ಅಲ್ಲದೆ, ಸಕಲ ಜೀವಿಗಳ ಕಲ್ಯಾಣವನ್ನು ಬಯಸಿದವನು. ಜನರ ಸೇವೆ, ತ್ಯಾಗ ಮುಂತಾದ ಮಾನವೀಯ ಮೌಲ್ಯಗಳನ್ನು ವಿಶ್ವಕ್ಕೆ ಸಾರಿ ಆ ಮೂಲಕ ಭಾರತದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಎತ್ತಿ ಹಿಡಿದ ಧೀಮಂತ ಅರಸ ಅಶೋಕ. ಅವನದು ಅಪೂರ್ವವಾದ ವ್ಯಕ್ತಿತ್ವ. ಅಶೋಕನ ಆಳ್ವಿಕೆ ಇತಿಹಾಸಕ್ಕೆ ಭವ್ಯವಾದ, ಚಿರಸ್ಮರಣೀಯ ಯುಗವಾಗಿದೆ. ಹಾಗಾಗಿ ಅಶೋಕನ ಆಳ್ವಿಕೆ ಭಾರತದ ಇತಿಹಾಸದ ಸುವರ್ಣ ಯುಗ ಎಂದು ಕರೆಯಲಾಗಿದೆ. ಇತಿಹಾಸ ಪ್ರಾಧ್ಯಾಪಕರಾದ ಡಾ. ಸಿ. ಚಂದ್ರಪ್ಪ ಈ ಕೃತಿಯಲ್ಲಿ ಅಶೋಕನ ಶ್ರೇಷ್ಠ ವ್ಯಕ್ತಿತ್ವವನ್ನು ಸಂಶೋಧನೆಯ ಮುಖಾಂತರ ಜೀವಂತಗೊಳಿಸಿದ್ದಾರೆ.

ಅಶೋಕನ ಇತಿಹಾಸ, ರಾಜನೀತಿ, ಧರ್ಮ, ಸಮಾಜೋಸಂಸ್ಕೃತಿ, ಹಾಗೂ ಸಾಹಿತ್ಯ, ಶಾಸನ, ವಾಸ್ತುಶಿಲ್ಪ ಮುಂತಾದ ವಿಷಯಗಳನ್ನು ಕುರಿತು ವಿವಿಧ ಆಯಾಮದ ನೆಲೆಯಲ್ಲಿ ರಚನೆಗೊಂಡ ಉದ್ದಂಥವಾಗಿದೆ. ಸಾರ್ವಕಾಲಿಕ ಮೌಲ್ಯಗಳನ್ನು ಒಳಗೊಂಡಿರುವ ಅಶೋಕನ ಕುರಿತಾದ ಈ ಕೃತಿಯ ಅಧ್ಯಯನ ನಮಗೆ ಬೆರಗು ಮೂಡಿಸುತ್ತದೆ. ಅಲ್ಲದೆ ಇಂಥ ಅಪರೂಪದ ಕೃತಿ ಡಾ. ಸಿ. ಚಂದ್ರಪ್ಪನವರ ಶ್ರಮನಿಷ್ಠ ಬರವಣಿಗೆಗೆ ಮಾದರಿಯಾಗಿದೆ. ಈ ಸತ್ಕಾರ್ಯಕ್ಕೆ ಡಾ. ಸಿ. ಚಂದ್ರಪ್ಪನವರನ್ನು ಅಭಿನಂದಿಸುತ್ತೇನೆ.

ಪ್ರೊ. ಹೆಚ್.ಟಿ. ಪೋತೆ ಗುಲ್ಬರ್ಗಾ ವಿಶ್ವವಿದ್ಯಾಲಯ

Other Details

author Chandrappa C
Publisher Sapna Book House
Categories Non-Fiction, Shop All Non-Fiction, Biographies & Memoirs, History & Politics
SKU V425Q56

Customer Reviews

Please log in to write a review.

Log In

Reviews (0)

No reviews yet. Be the first to review this product!

₹1,275.00 ಅಶೋಕ : ಸತ್ಯ-ಅಹಿಂಸೆಯ ಮಹಾಶಯ | Ashoka : Sathya-Ahimseya Mahashaya By C. Chandrappa, ಚಂದ್ರಪ್ಪ ಸಿ.