1 / 1
Nathan Thrall
ಆಬಿದ್ ಸಲಾಮನ ಬದುಕಿನಲ್ಲಿ ಒಂದು ದಿನ : ಜರುಸಲೇಮ್‌ನ ದುರಂತ ಕಥೆಯೊಂದರ ಹಿಂದೆ.. Abid salamana badukinalli ondu dina By Nathan Thrall
₹265.00
₹295.00
SAVE ₹30
Inclusive of all taxes
Product Description
<p class="MsoNormal" style="text-align:justify"><span style="font-family:"Nirmala UI",sans-serif">ಆಬಿದ್
ಸಲಾಮನ ಬದುಕಿನಲ್ಲಿ ಒಂದು ದಿನ' ಇದು ಜೆರುಸಲೆಮ್‌ನಲ್ಲಿ ಜೀವನ ನಡೆಸುತ್ತಿರುವ ಅಮೇರಿಕನ್ ಲೇಖಕ ಶ್ರೀ
ನೇತನ್ ಥ್ರಾಲ್ ಅವರು ರಚಿಸಿರುವ ಆಂಗ್ಲ ಮೂಲದ ಕನ್ನಡ ಭಾವಾನುವಾದ. ಮೂಲ ಕೃತಿಯು ಸಾಮಾನ್ಯ ಸತ್ಯಕಥನ
ವಿಭಾಗದಲ್ಲಿ ಪ್ರತಿಷ್ಠಿತ ಪುಲಿಟ್ಟರ್ ಪ್ರಶಸ್ತಿಗೆ ಭಾಜನವಾಗಿದ್ದು, 30ಕ್ಕೂ ಅಧಿಕ ಭಾಷೆಗಳಿಗೆ ಅನುವಾದಗೊಂಡಿದೆ.
ಈ ಪುಸ್ತಕವು ವರ್ಷದ ಶ್ರೇಷ್ಠ ಕೃತಿ ಎಂದು ವಿಶ್ವದ 20 ಪ್ರಕಾಶಕರಿಂದ ಗುರುತಿಸಲ್ಪಟ್ಟಿದೆ. ಫೆಲಿಸ್ತೀನ್‌ನಲ್ಲಿ
2012ರಲ್ಲಿ ನಡೆದ ಒಂದು ಬಸ್ ಅವಘಡವನ್ನೇ ಎಳೆಯಾಗಿಟ್ಟುಕೊಂಡು ಹೆಣೆದಿರುವ ಈ ಸತ್ಯಕಥೆಯಲ್ಲಿ ಲೇಖಕರು,
ಫೆಲಿಸ್ತೀನಿ ಪ್ರದೇಶದಲ್ಲಿ ಶಿಶುವಿಹಾರದ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ
ಇನ್ನೂ ಆಗಷ್ಟೇ ಕಣ್ಣು ಬಿಡುತ್ತಿದ್ದ ಪುಟಾಣಿಗಳು ಬೆಂಕಿಗೆ ಆಹುತಿಯಾಗಿದ್ದರ ಹಿಂದಿರುವ ನೋವನ್ನು
ಕಣ್ಣಿಗೆ ಕಟ್ಟಿದಂತೆ ಕಟ್ಟುಕೊಟ್ಟಿದ್ದಾರೆ. ಹಲವಾರು ದಶಕಗಳಿಂದಲೂ ಫೆಲಿಸ್ತೀನಿ ಜನತೆ ತಮ್ಮ ನೆಲಕ್ಕಾಗಿ,
ತಮ್ಮ ಘನತೆಯ ಬದುಕಿನ ಹಕ್ಕಿಗಾಗಿ ಸಾಮ್ರಾಜ್ಯಶಾಹಿ ಆಕ್ರಮಣದ ವಿರುದ್ಧ ನಡೆಸುತ್ತಿರುವ ನಿರಂತರ ಹೋರಾಟದಲ್ಲಿ
ಏನೆಲ್ಲಾ ಕಷ್ಟನಷ್ಟಗಳನ್ನು ಅನುಭವಿಸಿದ್ದಾರೆ, ಅವರ ವಿರುದ್ಧ ನಡೆಯುತ್ತಿರುವ ಅಂತರರಾಷ್ಟ್ರೀಯ ಹುನ್ನಾರಗಳೇನು,
ಅವರ ಪರವಾಗಿ ನಿಂತಿದ್ದ ಶಕ್ತಿಗಳು ಯಾವುವು ಎನ್ನುವುದನ್ನೂ ಈ ಕೃತಿಯಲ್ಲಿ ಸಾಂದರ್ಭಿಕವಾಗಿ ಲೇಖಕರು
ತಿಳಿಸಿರುವುದು ಸಮಯೋಚಿತವಾಗಿದೆ. ಬಂಡವಾಳಶಾಹಿಗಳ ಹಣ-ಅಧಿಕಾರ-ಭೂದಾಹಕ್ಕೆ ಮುಗ್ಧ ಮಕ್ಕಳ ಜೀವಗಳೂ
ಬಲಿಯಾಗುವುದು ದುರಂತ. ಮಕ್ಕಳನ್ನು ಪ್ರೀತಿಸುವ, ವಿಶ್ವ ಶಾಂತಿ ಬಯಸುವ, ಮಾನವೀಯತೆಯನ್ನು ಅಪ್ಪಿಕೊಳ್ಳುವ
ಎಲ್ಲರೂ ಈ ಕೃತಿಯನ್ನು ಓದುವಂತಹದ್ದು. ಶ್ರೀಮತಿ ಜ್ಯೋತಿ ಎ. ಸಾಮಾಜಿಕ ಹೋರಾಟಗಾರ್ತಿಯಾಗಿ ಕಾರ್ಯ
ನಿರ್ವಹಿಸುತ್ತ ವೈಚಾರಿಕ ಲೇಖನಗಳನ್ನು, ಕವನಗಳನ್ನು ರಚಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಸದಸ್ಯೆಯಾಗಿ,
ಎನ್‌ಎಫ್‌ಐಡಬ್ಲ್ಯುನ ರಾಜ್ಯ ಅಧ್ಯಕ್ಷೆಯಾಗಿ ಮತ್ತು ಕೆಎಸ್‌ಆರ್‌ಟಿಸಿ ಸ್ಟಾಫ್ & ವರ್ಕಸ್್ರ
ಫೆಡರೇಷನ್ ಅಧ್ಯಕ್ಷರಾಗಿದ್ದಾರೆ. ಅನುವಾದ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಭಾರತದ ಮಹಿಳಾ ಚಳುವಳಿಯ
ಸಂಕ್ಷಿಪ್ತ ಚರಿತ್ರೆ, ಓ! ಅರಬ್ಬಿ ಕೊಲ್ಲಿಯೇ... ಭಗತ್ ಸಿಂಗ್ ಇಂಕ್ವಿಲಾಬ್ ಜಿಂದಾಬಾದ್!, ಅತಂತ್ರ
ಸ್ವಾತಂತ್ರ್ಯ, ಭೂಮಿಕಾ, ಮಾರ್ಕ್ಸ್‌ವಾದ ಎಂದರೇನು?, ಜಜ್ ಲೋಯಾ ಅವರನ್ನು ಕೊಂದವರಾರು?, ಮುಂತಾದ
ಅನುವಾದಿತ ಕೃತಿಗಳನ್ನು ಹೊರತಂದಿದ್ದಾರೆ.</span><o:p></o:p></p>
Other Details
| author | Nathan Thrall |
|---|---|
| Publisher | Navakarnataka Publications |
| Categories | Non-Fiction, Shop All Non-Fiction, History & Politics |
| SKU | Q21321 |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹265.00
ಆಬಿದ್ ಸಲಾಮನ ಬದುಕಿನಲ್ಲಿ ಒಂದು ದಿನ : ಜರುಸಲೇಮ್‌ನ ದುರಂತ ಕಥೆಯೊಂದರ ಹಿಂದೆ.. Abid salamana badukinalli ondu dina By Nathan Thrall